ಕುಲ ಕುಲವೆಂದು ಹೊಡೆದಾಡದಿರಿ

ಕನಕದಾಸರು

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ

ಕುಲದ ನೆಲೆಯನೆನಾದರೂ ಬಲ್ಲಿರಾ || ಪ ||

ಹುಟ್ಟಿದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ

ಅಟ್ಟು ಉಣ್ಣದ ವಸ್ತುಗಳಿಲ್ಲ

ಗುಟ್ಟು ಕಾಣಿಸಬಂತು ಹಿರಿದೆನು ಕಿರಿದೆನು

ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜಾ || 1 ||

ಜಲವೇ ಸಕಲ ಕುಲಕ್ಕೆ ತಾಯಲ್ಲವೆ

ಜಲಜ ಕುಲವನೆನಾದರೂ ಬಲ್ಲಿರಾ

ಜಲದ ಬೋಬ್ಬುಳಿಯಂತೆ ಸ್ಥಿರವಿಲ್ಲವೀ ದೇಹಾ

ನೆಲೆಯರಿತು ನೀ ನೆನೆಕಂಡ್ಯ ಮನುಜಾ || ೨ ||

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ

ಹರಿಮಯ ನೆಲೆಯಾದಿ ಕೇಶವರಾಯನ

ಸಿರಿತಾನಾಗಿ ನೆಲೆಯಾದಿ ಕೇಶವರಾಯನ

ಚರಣ ಕಮಲವನೇ ಅರ್ಜಿಸುವನೇ ಕುಲಜ || ೩ ||